SCHOOL BLOGS


SCHOOL BLOGS_KASARAGOD AEO
11401-G. L. P. S. Athurkuzhi
11402-G. L. P. S. Bavikkara
11403-G. L. P. S. Bedadka New
11404-G. L. P. S. Chandragiri
11405-G. L. P. S. Chathankai
11406-G. L. P. S. Chemnad East
11407-G. L. P. S. Cherippady
11408-G. L. P. S. Eruthumkadavu
11409-G. L. P. S. Kalanad New
11410-G. L. P. S. Kalanad Old
11411-G. L. P. S. Kambar
11412-G. W. L. P. S. Kasaragod
11413-G. L. P. S. Kallumkoottam
11414-G. L. P. S. Kavugoli
11415-G. L. P. S. Kolathur I
11416-G. L. P. S. Kollampady
11417-G. L. P. S. Kudlu
11418-G. L. P. S. Kunduchi
11419-G. J. B. S. Madhur
11420-G. L. P. S. Manimoole
11421-G. L. P. S. Mundakai
11422-G. L. P. S. Panoor
11423-G. L. P. S. Perumbala
11424-G. M. L. P. S. Thalangara
11425-G. L. P. S. Thalangara Padinhar
11426-G. L. P. S. Tharanthattadka
11427-G. L. P. S. Thavanath
11428-G. L. P. S. Thekkil East
11429-G. L. P. S. Theruvath
11430-G. L P. S. Vavadukkam
11431-A. L. P. S. Bethurpara
11432-I. I. A. L. P. S. Chengala
11433-N. I. A. L. P. S. Deli
11434-A. L. P. S. Kallangai
11435-K. A. L. P. S. Kotoor
11436-S. D. P. A. L. P. S. Malla
11437-St. Marys. A. L. P. S. Marypuram
11438-V. A. L. P. S. Pady
11439-T. I. A. L. P. S. Pallam
11440-B. A. H. M. A. L. P. S. Panarkulam
11441-K.C.N.M.A.L P.S. Shankarmpady
11442-M. I. A. L. P. S. Thalangara
11443-Chinmaya Vidyalaya L. P. S. Kasaragod
11444-Balabhavan L. P. School Kasaragod
11445-Lu lu L. P. School Melparamba
11446-G. L. P. S. Anangoor
11447-G. W. L. P. S. Shiribagilu
11448-I. I. A. L. P. S. Cheroor
11449-P. A. L. P. S. Iriyanni
11450-G. F. U. P. S. Adkathubail
11451-G. U. P. S. Adkathubail
11452-G. U. P. S. Bendichal
11453-G. U. P. S. Chemnad West
11454-G. U. P. S. Chembarika
11455-G. U. P. S. Cherkala Mappila
11456-G. U. P. S. Hidayath Nagar
11457-G. U. P. S. Kanathur
11458-G. U. P. S. Kasaragod
11459-G. F. U. P. S. Kizhur
11460-G. U. P. S. Kolathur II
11461-G. U. P. S. Koliyadukkam
11462-G. U. P. S. Manadukkam
11463-G. U. P. S. Mogral Puthur
11464-G. U. P. S. Muliyar Mappila
11465-G. U. P. S. Nullippady
11466-G. U. P. S. Thekkil Paramba
11467-G. U. P. S. Thekkil West
11468-D. I. E. T. Mayippady
11469-A. U. P. S. Badira
11470-A. U. P. S. Bovikkana
11471-K. M. A. U. P. S. Kallakatta
11472-A. U. P. S. Kuttikkol
11473-A. U. P. S. Madonna
11474-A. U. P. S. Munnad
11475-A. U. A.U.P. S. Nellikunnu
11476-M. M. A. U. P. S. Thurthi
11477-Cha-Cha U. P. School Chattanchal
11478-Al Ameen U. P. School Copa
11479-Sa-Adiya U. P. School Deli
11480-Jama -Ath U. P. School Chemnad
11481-R G E. M. U. P. School Kalanad
11482-A. U. P. S. Karivedakam
11483-C. R. A. L. P. S. Bepu

2 comments:

  1. ಕಾಸರಗೋಡಿನ ಕನ್ನಡಶಾಲೆಗಳ ಶಿಕ್ಷಕ ಬಂಧುಗಳಲ್ಲಿ ಒಂದು ವಿನಂತಿ:
    ಇತ್ತೀಚೆಗೆ ನಾನು ಮಂಗಳೂರು ಸಮೀಪದ ಮೂಡಬಿದಿರೆಯಲ್ಲಿ ನಡೆದ ಆಳ್ವಾಸ್ ನುಡಿಸಿರಿ-2014 ಎಂಬ ರಾಜ್ಯಮಟ್ಟದ ಕನ್ನಡ ಸಾಹಿತ್ಯಕ ಸಾಂಸ್ಕೃತಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದೆ. ಪ್ರತಿವರ್ಷ ನಡೆಯುತ್ತಿರುವ ಈ ಸಮ್ಮೇಳನದ ಬಗ್ಗೆ ಹಲವರಿಗೆ ತಿಳಿದಿರಬಹುದು. ತಿಳಿಯದವರಿಗಾಗಿ ಒಂದು ಪುಟ್ಟ ಪರಿಚಯವನ್ನೊದಗಿಸಿದ (ವಿಕಿಪೀಡಿಯಾದಿಂದ)ಬಳಿಕ ಉದ್ದೇಶಿಸಿದ ವಿಚಾರವನ್ನು ಮುಂದಿಡುತ್ತೇನೆ.
    ಕಿರು ಪರಿಚಯ:ದಕ್ಷಿಣಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿರುವ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಡಿಯಲ್ಲಿ ನಡೆಸಲ್ಪಡುತ್ತಿರುವ ಕನ್ನಡ ಸಾಹಿತ್ಯಿಕ ಸೇವೆ "ಆಳ್ವಾಸ್ ನುಡಿಸಿರಿ"ಆಳ್ವಾಸ್ ಎಜುಕೇಷನ್ ಫೌಂಡೇಶನ್ ಆಶ್ರಯದಲ್ಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರ ಮುಂದಾಳತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ(೨೦೦೪)ಆಳ್ವಾಸ್ ಶಿಕ್ಷಣ ಸಂಸ್ಥೆ ಯಾವುದೇ ಸರಕಾರಿ ನೆರವನ್ನು ಪಡೆಯದೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನುಡಿಸಿರಿಯನ್ನು ಆಯೋಜಿಸುತ್ತಾ ಬಂದಿದ್ದು, ಸಮಯಪ್ರಜ್ಞೆ, ವ್ಯವಸ್ಥೆ, ಶಿಸ್ತುಬದ್ಧ ಕಾರ್ಯಕ್ರಮ ಸಂಯೋಜನೆಗಳ ಮೂಲಕ ಕನ್ನಡಿಗರಿಂದ "ಮಾದರಿ ಸಮ್ಮೇಳನ" ಎಂಬ ಪ್ರಶಂಸೆಯನ್ನು ಪಡೆಯುತ್ತಾ ಬಂದಿದೆ.
    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪ್ರತಿ ವರ್ಷ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್-’ ಜನವರಿಯಲ್ಲಿ ಮಿಜಾರಿನಲ್ಲಿರುವ ಶೋಭಾವನದಲ್ಲಿ ಕಳೆದ ಇಪ್ಪತ್ಮೂರು ವರ್ಷಗಳಿಂದ ನಡೆಯುತ್ತದೆ. ಕಳೆದ ವರ್ಷ 'ಆಳ್ವಾಸ್ ವಿಶ್ವನುಡಿಸಿರಿ- ವಿರಾಸತ್ 'ನಡೆದಿತ್ತು. ಸಂಪರ್ಕ.ಆಳ್ವಾಸ್ ನುಡಿಸಿರಿಯ ವೆಬ್ ತಾಣ- ಆಳ್ವಾಸ್ ನುಡಿಸಿರಿ- www.alvasnudisiri.com ನೋಡಿ.
    ಉದ್ದೇಶಿತ ವಿಚಾರ: ನಮ್ಮ ಪಕ್ಕದ ಜಿಲ್ಲೆಯಲ್ಲಿ ಪ್ರತಿವರ್ಷ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದಲ್ಲಿ ನಮ್ಮ ಕನ್ನಡಶಾಲೆಯ ಮಕ್ಕಳು ಭಾಗವಹಿಸುವುದು ಅತಿ ಅಗತ್ಯ ಎಂದು ನನಗೆ ತೋರಿತು. ಅಲ್ಲಿ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಬಂದ ಶಾಲಾಮಕ್ಕಳನ್ನು ಕಂಡಾಗ ಕಾಸರಗೋಡಿನ ಕನ್ನಡಶಾಲೆಗಳ ಮಕ್ಕಳು ಭಾಗವಹಿಸದಿದ್ದರೆ ಅದು ಅವರಿಗಾಗುವ ಸಾಂಸ್ಕೃತಿಕ ನಷ್ಟ ಎಂದು ಅನಿಸಿತು. ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಯೋಗ್ಯವಾದ ಸ್ಥಳ/ ಸಮಯ ಆಳ್ವಾಸ್ ನುಡಿಸಿರಿ. ಶೈಕ್ಷಣಿಕ ಪ್ರವಾಸದ ಹೆಸರಿನಲ್ಲಿ ಯಾವುದೋ ವಾಟರ್ ಪಾರ್ಕಿಗೆ ಮೋಜಿನ ಪ್ರವಾಸ ಕೈಗೊಳ್ಳುವುದಕ್ಕಿಂತ ಸಮೀಪದ ಮೂಡಬಿದ್ರೆಗೆ ಪ್ರವಾಸ ಹೋದರೆ ಮೋಜೂ ದೊರೆಯಬಹುದು, ಸಾಂಸ್ಕೃತಿಕ ಭಾಷಿಕ ಸಾಹಿತ್ಯಕ ಶೈಕ್ಷಣಿಕ ತಿಳುವಳಿಕೆಯೂ ಅಭಿಮಾನವೂ ಹೆಚ್ಚಬಹುದು. ಮೂರುದಿನಗಳ ಕಾಲ ನಡೆಯುವ ನುಡಿಸಿರಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿಧಿ ಶುಲ್ಕವಿಲ್ಲ, ಹಿರಿಯರಿಗೆ ಕೇವಲ ನೂರು ರೂ ಪ್ರತಿನಿಧಿ ಶುಲ್ಕ. ಮೂರುದಿನ ಔತಣಸಮಾನ ಭೋಜನ, ಉತ್ತಮ ವಸತಿ ಸೌಕರ್ಯ ಉಚಿತ. ಮೂಡಬಿದಿರೆಯಲ್ಲಿ ಸಾವಿರಕಂಬದ ಬಸದಿ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿವೆ. ಬೋಟಿಂಗ್ ಅವಕಾಶವಿದೆ. ಮಂಗಳೂರು,ಕಾರ್ಕಳ,ಉಡುಪಿ, ಧರ್ಮಸ್ಥಳ ಮೊದಲಾದ ಸ್ಥಳಗಳನ್ನೂ ಬೇಕಾದರೆ ಪ್ರವಾಸದ ಪಟ್ಟಿಯಲ್ಲಿ ಸೇರಿಸಬಹುದು. ಕಾಸರಗೋಡಿನಿಂದ ಮಂಗಳೂರು ಮೂಡಬಿದಿರೆಗೆ ಬೇಕಾದಷ್ಟು ಬಸ್ಸುಗಳಿವೆ. ಒಂದೇದಿನದ ಪ್ರವಾಸವನ್ನೂ ಆಯೋಜಿಸಬಹುದು. ನುಡಿಸಿರಿಯಲ್ಲಿ ಕೇವಲ ಸಾಹಿತ್ಯಕ ಕಾರ್ಯಕ್ರಮಗಳು ಮಾತ್ರವಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧರಾಜ್ಯಗಳ ಶ್ರೇಷ್ಠಕಲಾವಿದರಿಂದ ನೃತ್ಯ, ಸಂಗೀತ, ನಾಟಕ, ಯಕ್ಷಗಾನ ಮೊದಲಾದ ಕಲಾವೈವಿಧ್ಯ, ಹೇರಳ ಪುಸ್ತಕಗಳಿಂದ ಕೂಡಿದ ಮಳಿಗೆಗಳು, ಕರಕುಶಲವಸ್ತುಗಳು, ವ್ಯಾಪಾರಮಳಿಗೆಗಳು, ವಸ್ತುಪ್ರದರ್ಶನ, ಕೃಷಿಪ್ರದರ್ಶನ, ಸಂತೆ, (ಈ ಬಾರಿ ತುಳು,ಕೊಂಕಣಿ, ಬ್ಯಾರಿ ಸಿರಿಗಳು ಕೂಡ ಇದ್ದವು) ಹೀಗೆ ಶೈಕ್ಷಣಿಕ ಜ್ಞಾನಾಭಿವೃಧ್ಧಿಗೂ, ಮನರಂಜನೆಗೂ ಹೇರಳ ಅವಕಾಶವಿದೆ. ಆಳ್ವಾಸ್ ನುಡಿಸಿರಿಯಲ್ಲಿ ಯಾವುದೇ ಅವ್ಯವಸ್ಥೆಯನ್ನು ಕಾಣಲು ಸಾಧ್ಯವಿಲ್ಲ. ವಸತಿ, ಭೋಜನ, ಕಾರ್ಯಕ್ರಮ ವೀಕ್ಷಣೆ ಎಲ್ಲವೂ ಸುಲಭ, ಸುಗಮ. ಇದು ನನ್ನ ಅನುಭವ.ಮುಂದಿನ ನುಡಿಸಿರಿ ಸಮ್ಮೇಳನಗಳಿಗೆ(ಸಾಮಾನ್ಯವಾಗಿ ನವೆಂಬರ್-ಜನವರಿಯಲ್ಲಿ ನಡೆಯುತ್ತದೆ) ನಮ್ಮ ಕನ್ನಡಶಾಲೆಗಳಿಂದ ಎಲ್ಲ ಮಕ್ಕಳನ್ನು ಕರೆದೊಯ್ಯಲು ಸಾಧ್ಯವಾಗದಿದ್ದರೂ ಸಾಹಿತ್ಯ ಕಲಾಭಿರುಚಿಯಿರುವ ಕೆಲವು ಮಕ್ಕಳನ್ನಾದರೂ ಶಿಕ್ಷಕರು ಕರೆದೊಯ್ದರೆ ಒಳ್ಳೆಯದು.
    ನಾನಿದನ್ನು ನುಡಿಸಿರಿಯ ಪ್ರಚಾರಕ್ಕಾಗಿಯೋ ಜಾಹೀರಾತಿಗಾಗಿಯೋ ಹೇಳುತ್ತಲ್ಲ. ನಮ್ಮ ಕಾಸರಗೋಡಿನ ಪೇಟೆ ಪಟ್ಟಣಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಹೆಚ್ಚಿಸುವುದರ ಬದಲು ಕೀಳರಿಮೆ ಹುಟ್ಟಿಸುವ ವಾತಾವರಣ ಕಂಡುಬರುತ್ತದೆ. ಮುಂದಿನ ಕನ್ನಡಿಗ ಜನಾಂಗವಾದ ಕಾಸರಗೋಡಿನ ಕನ್ನಡಮಕ್ಕಳಲ್ಲಿ ಭಾಷಾಭಿಮಾನ, ಸಾಂಸ್ಕೃತಿಕ ಪ್ರೀತಿ, ಸಾಹಿತ್ಯಕ ಅರಿವು, ಶೈಕ್ಷಣಿಕ ಜ್ಞಾನ ಹೆಚ್ಚಲು ನುಡಿಸಿರಿಯಂತಹ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುವುದು ಅಗತ್ಯ. ಭಾಗವಹಿಸುವಂತೆ ಶಿಕ್ಷಕರು, ಪೋಷಕರು ಪ್ರೇರೇಪಿಸಬೇಕು. ಇಲ್ಲವಾದರೆ ಅದು ನಮ್ಮ ಮಕ್ಕಳಿಗೆ ನಷ್ಟ, ನಮಗೆ ನಷ್ಟ, ಕಾಸರಗೋಡಿನ ಕನ್ನಡಕ್ಕೆ ಆಗುವ ನಷ್ಟ.ನಮ್ಮ ವಿದ್ಯಾಧಿಕಾರಿಗಳೂ ನನ್ನ ಈ ಸಲಹೆಯನ್ನು ಪರಿಶೀಲಿಸಬೇಕಾಗಿ ವಿನಮ್ರ ವಿನಂತಿ.

    ReplyDelete
  2. ಕಾಸರಗೋಡು ಉಪಜಿಲ್ಲಾ ಕಲೋತ್ಸವ ಸಹಿತ ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ನಡೆಯುವ ಶಾಲಾ ಕಲೋತ್ಸವಗಳ ಪ್ರಚಾರಪತ್ರ (ಬ್ಯಾನರ್), ಪ್ರಕಟಣಾಪತ್ರ (ನೋಟೀಸ್) ಉದ್ಘೋಷಣೆ ( ಅನೌನ್ಸ್ ಮೆಂಟ್) ಸ್ಟೇಜ್ (ವೇದಿಕೆ) ಭಾಷಣ, ಸ್ಪರ್ಧೆಗಳು ಪ್ರತಿಯೊಂದರಲ್ಲೂ ಮಲಯಾಳ ಭಾಷೆಗೆ ನೀಡುವಷ್ಠೇ ಪ್ರಾಮುಖ್ಯತೆಯನ್ನು ಕನ್ನಡಭಾಷೆಗೂ ನೀಡಬೇಕು. ಯಾಕೆಂದರೆ ಭಾಷಾ ಅಲ್ಪಸಂಖ್ಯಾತ ಕನ್ನಡಪ್ರದೇಶವಾದ ಕಾಸರಗೋಡಿನಲ್ಲಿ ಗಣನೀಯ ಸಂಖ್ಯೆಯ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ. ಈ ಮಕ್ಕಳಿಗೆ ತಮ್ಮ ಮಾತೃಭಾಷೆ ಹಾಗೂ ಕಲಿಯುವ ಭಾಷೆಯ ಅವಗಣನೆ ನೋವನ್ನುಂಟುಮಾಡುವುದಲ್ಲದೆ ಮನಶ್ಶಾಸ್ತ್ರೀಯ ದೃಷ್ಟಿಯಿಂದ ನೋಡಿದರೆ ಅವರಿಗೆ ಈ ಎಳೆಯ ವಯಸ್ಸಿನಲ್ಲೇ ತಾವು ಈ ರಾಜ್ಯದಲ್ಲಿ ಎರಡನೇ ದರ್ಜೆಯ ಪ್ರಜೆಗಳು ಎಂಬ ಕೀಳರಿಮೆಯನ್ನುಂಟುಮಾಡಬಹುದು. ಇದು ಶಿಕ್ಷಣದ ಉದ್ದೇಶಗಳಿಗೆ ವಿರುದ್ಧವಾದುದು. ಆದ್ದರಿಂದ ಕನ್ನಡಭಾಷೆಯ ಕುರಿತು ಯಾವುದೇ ನಿರ್ಲಕ್ಷ್ಯ ಉಂಟಾಗದಂತೆ ಸಂಬಂಧಪಟ್ಟವರು ಕಾಳಜಿವಹಿಸಬೇಕಾಗಿ ಕೋರಿಕೆ. ಉದ್ದೇಶಪೂರ್ವಕವಾಗಿ ಕನ್ನಡವನ್ನು ಅವಗಣಿಸುವುದು ಕಂಡುಬಂದರೆ ಜವಾಬ್ದಾರಿಯುತ ಪೌರನ ನೆಲೆಯಲ್ಲಿ ಸನ್ಮಾನ್ಯ ರಾಷ್ಟ್ರಪತಿಯವರು, ಕೇಂದ್ರ ಭಾಷಾ ಅಲ್ಪಸಂಖ್ಯಾತ ಆಯೋಗ, ಮಾನವಹಕ್ಕುಗಳ ಆಯೋಗಕ್ಕೆ ವರದಿಮಾಡಬೇಕಾಗಿ ಬರಬಹುದು.

    ReplyDelete